ಪುಸ್ತಕ ೧ – ಮೆಲೂಹದ ಮೃತ್ಯುಂಜಯ
ಪುಸ್ತಕ ೨ – ನಾಗಾ ರಹಸ್ಯ
ಪುಸ್ತಕ ೩- ವಾಯುಪುತ್ರರ ರಹಸ್ಯ
ಇತ್ತೀಚೆಗೆ ಶಿವ ಸರಣಿಯ ಪುಸ್ತಕಗಳನ್ನು ಓದುವ ಭಾಗ್ಯ ಸಿಕ್ಕಿತು. ಇಂಗ್ಲಿಷ್ನಲ್ಲಿ ಓದಿ ಸರಿಯಾಗಿ ಅರ್ಥ ಮಾಡಿಕೊಳ್ಳಲು ಆಗದೇ ಅರ್ಧಕ್ಕೇ ನಿಲ್ಲಿಸಿದ್ದೆ.
ಎಸ್. ಉಮೇಶ್ ಬರೆದ ಕನ್ನಡ ಅನುವಾದ ಸಿಕ್ಕಿತು. ಬಹಳ ವಿಶಿಷ್ಟ ಕಥೆ.
ನಮ್ಮ ಪುರಾತನ ಪುರಾಣಗಳು, ಜ್ಞಾನದ ಭಂಡಾರಗಳು. ನಮ್ಮ ಜ್ಞಾನದ ಮಿತಿಯಿಂದಾಗಿ, ಇಲ್ಲಿವರೆಗೂ ಬರೀ ಹರಿಕಥೆಯ ಗೊಡ್ಡು ಪುರಾಣಗಳು ಎಂದು ವಿದ್ಯಾವಂತರಿಂದ ಹೀಗಳೆಯುವ ಮಟ್ಟದಲ್ಲಿದ್ದ ಕಥೆಗಳು, ಹೀಗೆ ಹೊಸ ರೂಪ ಪಡೆದು ಬಂದಾಗ ಓದಲು ಹೆಮ್ಮೆಯ ವಿಷಯ.
ಅವತಾರ್ ಇಂಗ್ಲಿಷ್ ಸಿನಿಮಾ ನೋಡಿದಾಗ, ಇದರಲ್ಲಿ ಇರುವ ಫಿಲಾಸಫಿ ,ನಮ್ಮ ಪುರಾತನ ಕಾಲದ ಜ್ಞಾನದ ಇನ್ನೊಂದು ರೂಪ ಎಂದು ಅನಿಸುತ್ತದೆ.
ನಮ್ಮ ಉಪನಿಷತ್ ಗಳ ಜ್ಞಾನ – ಕ್ವಾಂಟಮ್ ಭೌತಶಾಸ್ತ್ರ ಎಂದು ತಿಳಿದಾಗ ಆಶ್ಚರ್ಯ, ಹೆಮ್ಮೆ ಎನಿಸುತ್ತದೆ.
ಈಗಿನ ವಿದ್ಯಾವಂತ ಯುವಕರು ತಮ್ಮ ಬೇರುಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಇಂತಹ ಪುಸ್ತಕಗಳು ಪ್ರೇರಣೆ ನೀಡುತ್ತದೆ.
ಮೂರು ಪುಸ್ತಕಗಳನ್ನು ಓದಿ.
ತುಂಬಾ ಚೆನ್ನಾಗಿದೆ. ಗೊತ್ತಿರುವ ವಿಷಯವೇ ಆದರೂ, ಎಷ್ಟು ವೈಜ್ಞಾನಿಕವಾಗಿ ಕಥೆ ಹೇಳುತ್ತಾರೆ ಲೇಖಕರು.
ನಾವು ಸಣ್ಣವರಿದ್ದಾಗ ಹಿರಿಯರು ಹೇಳುತ್ತಿದ್ದರು – “ಇನ್ನು ಮುಂದೆ ಮಕ್ಕಳು ಹೇಗೆ ನಮ್ಮ ಸಂಸ್ಕೃತಿ ಉಳಿಸುತ್ತಾರೋ” ಎಂದು.ಆದರೆ ಈಗಿನ ವಿದ್ಯಾವಂತ ಯುವಕರು ಇನ್ನೂ ಚೆನ್ನಾಗಿ ಹಳೆಯ ಜ್ಞಾನವನ್ನು ಈಗಿನ ವಿಜ್ಞಾನ , ತಂತ್ರಜ್ಞಾನಗಳ ಜೊತೆ ಬೆರೆಸಿ ಸುಂದರವಾಗಿ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪುಸ್ತಕ ಪರಿಚಯ ಮಾಡುವುದಿಲ್ಲ. ನೀವೇ ಓದಿ ಆನಂದಿಸಿ.
Oduvudaralli bahaLa aasakthi.. Housewife. Mom of three. Kannadathi. Nam ooru Udupi.