ರಾಜಕ್ರೀಡೆ – ಸತ್ಯ ಕಾಮ : ವಿಮರ್ಶೆ

ಇದು ಕೃಷ್ಣನ ಕಥೆ. ಅವನ ಹುಟ್ಟಿನಿಂದ ಶುರುವಾಗಿ ಅವನ ಅಂತ್ಯದವರೆಗಿನ ಜೀವನ ಪಯಣದ ಕಥೆ. ಅವನ ವರ್ಣನೆಯಲ್ಲೇ ಮೂಡಿಬಂದಿದೆ.

ಇದನ್ನು ಬರೆದವರು ಸತ್ಯಕಾಮ. ಅವರ ಬರವಣಿಗೆಯ ಶೈಲಿ ಬಹಳ ವಿಶಿಷ್ಟವಾದದ್ದು.

ರಾಜಕ್ರೀಡೆ

ಬಹಳ ಸಣ್ಣ ವಾಕ್ಯಗಳಲ್ಲಿ ಬರೆದರೂ, ಅದರ ಅರ್ಥ ಅಗಾಧವಾಗಿರುತ್ತದೆ.

ಕೃಷ್ಣನ ಕಥೆ ಎಲ್ಲರಿಗೂ ಪರಿಚಿತ. ಆದರೆ ಇಲ್ಲಿ ವಿಭಿನ್ನ ದೃಷ್ಟಿಕೋನದಿಂದ ನೋಡುವ ರೀತಿ, ಕುತೂಹಲ ಮೂಡಿಸಿದೆ.

ಇಲ್ಲಿ ಕೃಷ್ಣ ತನ್ನ ಬಾಲ್ಯದ ಆಟಗಳು, ಗೆಳೆಯರ ಬಗ್ಗೆ ಮಾತ್ರ ಹೇಳುತ್ತಾನೆ. ಎಲ್ಲೂ ಬಾಲ್ಯದಲ್ಲಿ ಕಂಸ ಕಳುಹಿಸಿದ ರಾಕ್ಷಸರ ಸಂಹಾರದ ಬಗ್ಗೆ ಮಾತಿಲ್ಲ.

ರಾಜಕ್ರೀಡೆ, ಹೆಸರೇ ಹೇಳುವಂತೆ ರಾಜಕೀಯ ಏರಿಳಿತದ ವಿಚಾರಗಳನ್ನು, ಕ್ರೀಡಾ ಮನೋಭಾವದಿಂದ ಹೇಗೆ ಕೃಷ್ಣ ಎದುರಿಸಿದ, ಎಂದು ತಿಳಿಸುತ್ತದೆ.

ಎಲ್ಲೂ ಕೃಷ್ಣ ಅಸಾಮಾನ್ಯ ಎನಿಸುವುದಿಲ್ಲ. ಅವನೊಬ್ಬ ಕರ್ಮಯೋಗಿ. ತನಗಾಗಿ ಏನನ್ನೂ ಬಯಸದೆ, ರಾಷ್ಟ್ರ ಹಿತ, ಜನರ ಹಿತ ಕಾಪಾಡಲು ಏನಾದರೂ ಮಾಡಬಹುದು ಎಂದು ತೋರಿಸಿ ಕೊಟ್ಟ.

ಸಂಸಾರಕ್ಕೆ ಅಂಟಿಯೂ ಅಂಟದಿರುವ ಅವನ ಯೋಗಿಯ ಜೀವನದ ಉದಾತ್ತ ಚಿಂತನೆಗಳು ಹೆಮ್ಮೆ ತರುತ್ತದೆ.

ಭಾಗವತದ ಕಥೆ ರಾಜಕೀಯ ದೃಷ್ಟಿಯಿಂದ ನೋಡುತ್ತಾ ಹೋದರೆ ,ಈ ಕಾಲಕ್ಕೂ ಎಷ್ಟು ಸಲ್ಲುತ್ತದೆ ಎಂದು ಆಶ್ಚರ್ಯವಾಗುತ್ತದೆ.

Leave a Reply

Your email address will not be published. Required fields are marked *